ಕಿಟಕಿಯಾಚೆಯ ಮಳೆ…

ಇರುಳೆಲ್ಲ ಸುರಿದ ಮಳೆಗೆ
ಇವಳ ನರ ನಾಡಿಗಳೆಲ್ಲ
ಮುದ್ದೆ ಮುದ್ದೆ…

ಕತ್ತಲು ಮನೆಯೊಳಗೆ
ಕಿಟಕಿಯಾಚೆ ಸುರಿವ
ಬೇಡದ ಮಳೆ!

ಖಾಲಿ ಅಂತರಂಗಕೂ
ಕವಿದಿದೆ
ಏನೋ ಮಂಕು;
ನೀರೇ ಇಂಗಿದ ಕಡಲಿಗೂ
ಉಕ್ಕು ಭರತದ ಚಪಲ?

ಬಿರಿದುಬ್ಬಿ ಹರಿದಿದೆ ವ್ಯಥೆ
ನಡುವಿದೋ ದಿಕ್ಕು ತಪ್ಪಿದೀ
ಹರಕಲು ತೆಪ್ಪ,
ಇದೂ… ನೆಮ್ಮದಿಯ ಪಯಣ?

ಒರೆಗೂ ಮರುಳು
ತಿಕ್ಕಿದಾಪರಂಜಿ ಬದಲಿಗೆ
ತುಕ್ಕುಹಿಡಿದ ಎಂಥದೋ ಲೋಹ,
ಭ್ರಾಂತ ಅಣುವಿಗೂ ತನ್ನದೇ ತೂಕ

ಇದು ಮಳಲ ಮೇಲಿನ
ಕಾಗದ ದೋಣಿ…
ಯಾವ್ಯಾವುದೋ ಗಾಳಿಗಳ ತಿವಿತ
ತೇಲು ಎಂದರೆ ನಕ್ಕೀತು ಸುಮ್ಮನೆ!

ಜಂಕು ಗಟ್ಟಿದ ನೆನಪುಗಳ
ಡಬ್ಬದೊಳಗಿನ ರೀಲು,
ಕಿಟಕಿಯಾಚೆಯ ಮಳೆಗೂ
ಎಲ್ಲಿ ಕೊನೆ ಮೊದಲು?

Advertisements

About Badarinath Palavalli

ನಾನು ಟೀವಿ ಛಾಯಾಗ್ರಾಹಕ.

Posted on 27/02/2011, in ಕವನಗಳು. Bookmark the permalink. 4 Comments.

  1. ಪೇಜ್ ತುಂಬಾ ಚೆನ್ನಾಗಿದೆ ಬದರಿ .. 🙂
    ಜಿ.ವಿ. ಜಯಶ್ರೀ

  2. chandrika hegde

    camera kannalli kanda:
    ಜಂಕು ಗಟ್ಟಿದ ನೆನಪುಗಳ
    ಡಬ್ಬದೊಳಗಿನ ರೀಲು,
    ಕಿಟಕಿಯಾಚೆಯ ಮಳೆಗೂ
    ಎಲ್ಲಿ ಕೊನೆ ಮೊದಲು?…
    saalugalu….
    tumbaa… istavaayitu…

  3. bahala sogasaagide…….:)))

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: