ನಿನಗೂ ನನಗೂ ನಡುವೆ…

ಸಾಗರನ ತೀರದಲಿ
ಉಸುಕಿನ ಮೇಲೆ ಊರಿದ ಹೆಜ್ಜೆ ಗುರುತು
ಬದುಕು…
ನಡು ನೀರ ಪಯಣದಲಿ
ತಳ್ಳು ಗಾಳಿಗೆ ಕಾದ ಹಾಯಿ ದೋಣಿಯು
ಬದುಕು…
ಕಡುಗತ್ತಲ ಗವಿಯಲಿ
ತಡವರಿಸಿ ಎಡವಿದಾಗಲೊಮ್ಮೆ ಹಂಬಲಿಸೋ ಬಿಸಿಲುಗೋಲು
ಬದುಕು…

ಒಮ್ಮೆ ತುಂಬಿಸಿ ಮತ್ತೆ ಹೊರಬಿಟ್ಟ ಅರಗಳಿಗೆ
ಮರುಕಳಿಸೋ ಪ್ರಶ್ನೆಯಂಥ ಅಸ್ಪಷ್ಟವೀ ಜೀವದ ಉಸಿರು;
ನಿನ್ನ ಹಂಗಿಗೂ ಸಿಗದೆ ತನ್ನ ಪಾಡಿಗೆ ತಾನು
ಬಡಿಬಡಿದು ಗಕ್ಕನೆ ದಿಣಿದು ನಿಲ್ಲುವುದೇನೋ ಹಿಡಿ ಹೃದಯ?

ನಡುವೇಕೆ
ಸುಮ್ಮನೆ ಜಗಳ ಮುನಿಸು ಕತ್ತಿ ಮಸೆವಾಟ
ಸಿಕ್ಕ ಅರಪಾವು ಹೊತ್ತೂ ಕೆಸರು ಚಲ್ಲಾಟ
ನಖಶಿಖಾಂತ ಏರಿದ ಸಿಟ್ಟು ಲಾವಾರಸವಾಗಿ
ಉಕ್ಕುಕ್ಕಿ ಮೊದಲು ತನುವನೇ ಸುಟ್ಟು
ಮತ್ತಲ್ಲವೇ ಊರ ಮಾತು?

ನಾಳೆ ಸಂಧಿಸುವ ಭಾಗ್ಯ ಕೊಡಬಹುದೇ
ಮೇಲೆ ಲೆಕ್ಕ ಬರೆವವನು, ನಮ್ಮ ನಡುವೆ…
ಉಳಿದ ರಸಗಳಲೆಲ್ಲ ಮಿತ್ರ ನಗು ಮಾತ್ರ ಬಿಟ್ಟೀ
ಇರಲಿ ಒಳ ಕಾವು, ಈಗ ನಕ್ಕು ಬಿಡು ಭೀಢೆಯ ಬಿಟ್ಟು…

Advertisements

About Badarinath Palavalli

ನಾನು ಟೀವಿ ಛಾಯಾಗ್ರಾಹಕ.

Posted on 24/04/2011, in ಕವನಗಳು. Bookmark the permalink. 1 Comment.

  1. ನಾಳೆ ಸಂಧಿಸುವ ಭಾಗ್ಯ ಕೊಡಬಹುದೇ
    ಮೇಲೆ ಲೆಕ್ಕ ಬರೆವವನು, ನಮ್ಮ ನಡುವೆ…………….:) wah….

    ..yen gottaa………..nimma page modifications tumba chennagide……attractive………

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: