ನೆನಪು ಮುಸುಕು ಮುಸುಕು…

ಅವಳೇ ಹಾಗೆ

ಎಲ್ಲೆಂದರಲ್ಲಿ ಹೇಗಿದ್ದರೆ ಹಾಗೆ
ಆವರಿಸುವ ಮಾಯೆ!

ಹೆಜ್ಜೆ ಜಾಡನು ಹುಡುಕುತ್ತಾ
ಎದೆಯ ಬಂಜರಲೆಲ್ಲ ಅಲೆದೆ,
ಮೆದುಳ ಪಕ್ಕೆಗೆ ಒದ್ದು
ಒಳಗಣ್ಣ ಹರೆವಂತೆ ತಿಕ್ಕಿದೆ
ರೂಪವೂ ಗುರುತೂ ಹತ್ತಲಿಲ್ಲ!

ಗತ ಜನ್ಮದ ಸವಕಲಲೆಲ್ಲೋ
ಅವಳು ಮಾತ್ರ ನನಗೆ
ಕಳಚಿಕೊಂಡ ಕೊಂಡಿ…

ಮತ್ತೆ ಮತ್ತೆನೆನಪಾಗುವಳು
ಅವಳು,
ಯಾವುದೋ ನಿಲುಕಿನಲ್ಲಿ?
ಒಮ್ಮೆ ಮುಂಜಾವಿನಂತೆ
ಮಗದೊಮ್ಮೆ ಕಾರಿರುಳಿನಂತೆ!

 

also visit my blogs:

www.badari-poems.blogspot.com

www.badari-notes.blogspot.com

Advertisements

About Badarinath Palavalli

ನಾನು ಟೀವಿ ಛಾಯಾಗ್ರಾಹಕ.

Posted on 19/05/2011, in ಕವನಗಳು. Bookmark the permalink. 3 Comments.

  1. “ಅವಧಿ” ಈಗಾಗಲೇ ಇದನ್ನು ಓದಿ ಮೆಚ್ಚಿಕೊಂಡಿದ್ದೇನೆ.
    ಆಗುಂಬೆಯ ಇಬ್ಬನಿಯಂತಿದೆ ಕವಿತೆ.
    ಒಂಥರಾ ಮ್ಯಾಜಿಕಲ್ entity ಇದೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: