ಛಾವಣಿಯ ಬಾವಲಿ…

೧.

ಸವರು ಕಾಡು, ಎತ್ತಿಕೋ ಕೋವಿ
ಇಟ್ಟಾಡಿಸಿ ಸುಡು

ತೆವಳಲಿ, ಈಜಲಿ, ಹಾರಲಿ, ಓಡಲಿ;

ಬಿಟ್ಟೀಯ! ಬಲು ತೀಕ್ಷ್ಣ ನಿನ್ನ ಜಟರ ರಸ,

ಪರೀಕ್ಷೆಯಾಗಲಿ ಶಬ್ಧವೇದಿಯ ಗುರಿ
ಬೀಗು ಹೆಡೆಯೇರಿಸಿ ಸಪ್ತವರ್ಣದ ಗರಿ!

೨.
ಗವಿ ಕತ್ತಲ ಛಾವಣಿಗೆ ಕುರುಡು ಬಾವಲಿ;
ಹಿಕ್ಕೆ ಮೆಲ್ಲಲು ಕಾದ ಕ್ಷುಧ್ರ ತಳಪಾಯದಲ್ಲಿ,
ಬಿಲವೋ, ಪೊಟರೆಯೋ ಅಲ್ಲೇ ಸಂತಾನವಲ್ಲಿ!
ನೂರು ದೈವಕೂ ಭಿನ್ನ ತಿನ್ನುವಾಹಾರ
ಕೆಲವು ಶಾಖಾಹಾರ, ಕೆಲವು ಮಾಂಸಾಹಾರ…

೩.
ಹನಿ ರಕ್ತದೊಳಗೂ ಕಣದ ಗಣ
ಸಹಸ್ರ ನರವ್ಯೂಹ ಜೀನನು ಹಿಡಿದು
ದೇಹ ಶಾಸ್ತ್ರವ ಶಾಸಿಸುವ ಮಿದುಳು;
ಒಳಗಂಗಾಂಗ ತುಡಿತವನೇ
ನಿರ್ಧರಿಸಲಾರದ ನರಾಧಮ!
ಭೂಮ್ಯಾಕಾಶ ವಸಾಹಾತು ಬೇಕು…

೪.
ಉರಿವಾಗ್ನಿ ಆರಿದರೆ ಅಂಗಳದಿ ಶವ
ಕಣ್ಣೋ, ದೇಹವೋ ದಾನಕ್ಕೆ ಯೋಗ್ಯ
ಆಹಾ ಪುರುಷಾಹಾಂಕರ! ಅದು ವರ್ಜ್ಯ;
ಸೀಳು ಎದೆ ಕತ್ತರಿಸಿ ತೆಗೆ ಪೇಸು ಮೇಕರ್ರು
ಕಲ್ಲಿರುವ ತಾವಲ್ಲಿ ಸತ್ತ ಹೃದಯ…

೫.
ಮನಸ ಮಸೂರಕೂ ಸುತ್ತ
ಕೈಯಾರೆ ಪೊರೆ ಹೆಣೆವೆ ಬುದ್ಧಿಗೇಡಿ;
ಇಲ್ಲದೆಡೆ ಕೆದಕದಿರು ಇಲ್ಲದಾ ಸುಖಃ
ಕೊರಗು ಕೊರಗು ಯಾರೋ ಖುಷಿಸಿದರೇ,
ಗೀರು ಕಡ್ಡಿ! ನೆರೆ ಮನೆ ಸುಡುವಾಗ ನಕ್ಕೀಯಾ
ಬೂದಿಯಾಗದೇ ಜೊತೆಗು ನಿನ್ನದೇ ಮನೆ?

Advertisements

About Badarinath Palavalli

ನಾನು ಟೀವಿ ಛಾಯಾಗ್ರಾಹಕ.

Posted on 08/08/2011, in ಕವನಗಳು. Bookmark the permalink. Leave a comment.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: