ಅವನಿಲ್ಲದ ಕಾಡು…

ಭೀಮನ ಅಮಾವಾಸ್ಯೆಯ ಮರುದಿನ
ಸುಪ್ರಭಾತಕೆ ತಲ್ಲಣಿಸಿತಲ್ಲ ನಾಡು,
ಹುಂಬನು ಹೊತ್ತೊಯ್ದ ಮೇರು ನಟರೂ
ನೂರೆಂಟು ದಿನ ವನವಾಸ ಪಾಡು…

ಅಸಲವನ ಕಾಡೇ ಅಭೇದ್ಯ
ಒಮ್ಮೆ ಕುರುಚಲು ಬೀಡು
ಮುಗಿಲೆತ್ತರಕೆ ಆನೆ ಹುಲ್ಲು
ನಿಬಿಡ ಮರಗಿಡ ಸಂಪತ್ತು
ಮತ್ತೆ ಬಟಾ ಬಯಲು…

ಈಗಲ್ಲಿ ನೆಲ ಬಾಂಬು ಸಿಡಿಯುವುದಿಲ್ಲ
ತುಪಾಕಿ ಮೊರೆಯುವುದಿಲ್ಲ
ಸುಳ್ಳು ಸಂಧಾನಕಾರರಿಲ್ಲ
“ಹರಹರ ಮಹಾದೇವ್” ಉದ್ಘೋಷವಿಲ್ಲ
ನಿರಮ್ಮಳವಾಗಿದೆ ಕಾಡು ಮೇಡು

ಮಡಿದ ಪೊಲೀಸರ ನಿಟ್ಟುಸಿರ
ಹೊತ್ತು ಹರಿಯುತ್ತೆ ಅದೇ ಪಾಲಾರ್,
ಘೀಳಿಟ್ಟು ಅತ್ತ ಆನೆಗಳೇ ಮುದಿಬಿದ್ದು
ಮರೆತಿವೆ ಕಳಕೊಂಡ ತಮ್ಮ ದಂತ,
ಚಿಗುರೊಡೆದು ನಳನಳಿಸಿದೆ ಶ್ರೀಗಂಧ…

ತಲೆ ಕತ್ತರಿಸಿ ಕೊಂದ ಶ್ರೀನಿವಾಸನ್
ಕಾಹು ಕೊಂದಿಟ್ಟ ಶಕೀಲ್ ಅಹಮದ್
ತಾ ಕೊಂದಿಲ್ಲವೆಂದಿದ್ದ ನಾಗಪ್ಪನಂತವರೂ
ಬದುಕಿ ಬಂದಾರೇ ನಿರ್ಧಯೀ ಹೇಳು?
ಉತ್ತರಿಸುವವನೇ ಜೀವಂತವಿಲ್ಲ…

ಕಾಡುಗಳ್ಳನವನು ಬಲು ಗುನ್ನೆಗಾರ
ಅಪಹರಣ ಅಟ್ಟಹಾಸ ಮರಸು ಬೇಟೆಯೇ
ನರ ಹಂತಕ ವೀರಪ್ಪನ್ ಜಮಾನ!
ಕಾಲಧರ್ಮಕೆ ಸಿಕ್ಕು ಅವನೇ ಸತ್ತರೂ
ಕಳ್ಳ ಗಂಟಿನ ಕುಂಭ ಬಯಲಾಗಲೊಲ್ಲ!

ಪಾಪ ಉಸಿರಾಡುತಿದೆ ಈಗೀಗ
ಆವನಿಲ್ಲದ ಕಾಡು…

(ಚಿತ್ರ ಕೃಪೆ : ಅಂತರ್ಜಾಲ)

(ಅವಧಿ ಡಾಟ್ ಕಾಂನಲ್ಲಿ ದಿನಾಂಕ: 25.07.2011 ಪ್ರಕಟಿತ) 

http://avadhimag.com/?p=58684
Advertisements

About Badarinath Palavalli

ನಾನು ಟೀವಿ ಛಾಯಾಗ್ರಾಹಕ.

Posted on 24/07/2012, in ಕವನಗಳು and tagged , . Bookmark the permalink. 1 Comment.

  1. ಶ್ರೀ ಬದರೀನಾಥ ಪಲವಳ್ಳಿಯವರೇ, ನಿಮ್ಮ ಬ್ಲಾಗುಗಳಿಗೆ ಭೇಟಿ ಕೊಟ್ಟು ಕೆಲವು ಕವನಗಳು, ಬರಹಗಳನ್ನು ಓದಿದೆ. ಮನಮುದಗೊಳಿಸಿತು. ಧನ್ಯವಾದಗಳು.
    ಶ್ರೀ ಸುಧಾಕರ ಶರ್ಮರವರ ಕುರಿತು ನನ್ನ ವೇದಜೀವನ ತಾಣದಲ್ಲಿ ವಿಚಾರಿಸಿರುವಿರಿ. ಅವರ ವಿಳಾಸ: #15, ಮೌಂಟ್ ಜಾಯ್ ರಸ್ತೆ, ಹನುಮಂತನಗರ, ಬೆಂಗಳೂರು-560019. ದೂ: 080-22421950.
    ಹರಿಹರಪುರಶ್ರೀಧರ್ ಇಂದು ಸಂಜೆ ಅವರನ್ನು ಕಾಣಲು ಹೋಗಿದ್ದಾರೆ. ನೀವೂ ಸಾಧ್ಯವಾದರೆ ಹೋಗಬಹುದಾಗಿದೆ.
    -ನಾಗರಾಜ್.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: