ಅಜ್ಞಾತ ಕವಿ…

808681_Poet-Tree
ನನ್ನೊಳಗೆ ನಾನಿರದ
ಶೂನ್ಯ ವೇಳೆಯಲೊಮ್ಮೆ
ಗುಡಿಸಿ ಹಾಕಲಿ ಮನಸು
ಮಹಾ ಕವಿಯ ತೆವಲು

ಅದೇ ಪದಗಳ ಅರೆದು
ಮೇಲಿನಿತು ಬಣ್ಣ ಪೂಸಿ
ಬೆನ್ನು ತಟ್ಟಿಕೊಳದಿರಲಿ
ಈ ಅಜ್ಞಾತ ಕವಿಯು

ನಿಜಾಗ್ನಿ ಕರಗಿಸಲಿ ಕೊಬ್ಬು
ಎನ್ನದೇ ಕಾವ್ಯವೆನು ಮಂಕು
ದೈವ ಮಳೆ ತೊಳೆಯಲದು
ಹೂಳುಮಯ ಒಳ ಮೋರಿ

ಸಂಗ್ರಹಿತ ಕತ್ತಲಳಿಸಲಿ
ತಿಳುವಳಿಕೆ ಬಿರು ಬೆಳಕು
ನಾತ ಒಳಾಂಗಣವನು
ಪರಿಮಳಿಸಲಿ ನವ್ಯ ಗಾಳಿ

ಪೇರಿಸುವ ಗ್ರಂಥಗಳೆಲ್ಲ
ತುಂಬಲವು ಜ್ಞಾನ ಸಿದ್ದಿ
ಅರೆ ಪಾವು ತಿಳುವಳಿಕೆ
ಒಪ್ಪವಾಗಿಸಲೆನ್ನ ತಿದ್ದಿ

(ಚಿತ್ರ ಕೃಪೆ: ಅಂತರ್ಜಾಲ)

Advertisements

About Badarinath Palavalli

ನಾನು ಟೀವಿ ಛಾಯಾಗ್ರಾಹಕ.

Posted on 19/05/2013, in ಕವನಗಳು and tagged . Bookmark the permalink. 2 Comments.

  1. ಸುಂದರ ತಾಣ, ಉತ್ತಮ ಅಂಶಗಳಿವೆ.
    ..
    ಹಾನೆ ನನ್ನ ತಾಣಕ್ಕೂ ಬೇಟಿಕೊಟ್ಟು ನೋಡಿ.
    http://spn3187.blogspot.in/p/blog-page_44.html

  2. ಪೇರಿಸುವ ಗ್ರಂಥಗಳೆಲ್ಲ
    ತುಂಬಲವು ಜ್ಞಾನ ಸಿದ್ದಿ
    ಅರೆ ಪಾವು ತಿಳುವಳಿಕೆ
    ಒಪ್ಪವಾಗಿಸಲೆನ್ನ ತಿದ್ದಿ
    ಈ ಸಾಲುಗಳು, ಇಂದಿನ ಶಿಕ್ಷಣ ಕನ್ನಡಿಯಾಗಿದೆ ಸರ್,,,,,,, ಬಹಳ ಚೆನ್ನಾಗಿದೆ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: