ನನ್ನ ಮಾತು…

ನಮಸ್ಕಾರ,

ನನ್ನಂತಹ ಅಜ್ಞಾತ ಕವಿ ಕಟ್ಟಿಕೊಂಡಿರುವ ಸಣ್ಣ ಬ್ಲಾಗಿಗೆ ನಿಮಗೆ ಸ್ವಾಗತ.

ನಾನೋಬ್ಬ ಟೀವಿ ಛಾಯಾಗ್ರಾಹಕ. ಛಾಯಾಗ್ರಹಣ ಕಲೆಯ ಮೋಡಿಗೆ ಒಳಗಾದ ಕ್ಯಾಮರಾ ಅಭಿಮಾನಿ. ಕವಿತೆ ಎನ್ನುವುದು ನನ್ನ ಉಸಿರು.

ಇಲ್ಲಿ ಪ್ರಕಟಿಸಿರುವ ನನ್ನ ಬರಹಗಳನ್ನು ಕವನಗಳು ಎನ್ನುವರೋ ಅಥವ ಇವು ಕವಿತೆಯೇ ಅಲ್ಲವೋ ಎನ್ನುವ ಮೊದಲ ಅನುಮಾನ ನನಗೇ ಸದಾ ಕಾಡಿದೆ. ಸಾಹಿತ್ಯವನ್ನು ಬಲ್ಲ ಪ್ರಾಜ್ಞರನ್ನು ಕಂಡು ನನ್ನ ಕೃತಿಗಳನ್ನು ತೋರಿಸಿ ಅವರ ಅಭಿಪ್ರಾಯ ಪಡೆಯುವ ತೀವ್ರ ಉತ್ಸುಕತೆ ಖಂಡಿತ ಇದೆ.

ನಿಮಗೇ ಗೊತ್ತಿರುವಂತೆ ಮಿಕ್ಕೆಲ್ಲ ಸಾಹಿತ್ಯ ಪ್ರಕಾರಗಳಿಗೆ ಹೋಲಿಸಿದರೆ ಕಾವ್ಯಕ್ಕೆ ಓದುಗರು ಬಹಳ ಕಡಿಮೆ. ಪ್ರಾತಃ ಸ್ಮರಣೀಯ ಕವಿಗಳಾದ ಕುವೆಂಪು, ಬೇಂದ್ರೆ, ಅಡಿಗ, ನರಸಿಂಹಸ್ವಾಮಿ, ಲಕ್ಷ್ಮಣರಾವ್, ಲಕ್ಷ್ಮೀನಾರಾಯಣ ಭಟ್ಟ, ನಿಸಾರ್ ಅಹಮದ್ ಹೀಗೆ ಬೆರಳೆಣಿಕೆಯಷ್ಟು ಜನಪ್ರಿಯ ಕವಿಗಳಷ್ಟೇ ತಮ್ಮ ಛಾಪನ್ನು ಮೂಡಿಸಿ, ತಮ್ಮದೇ ಓದುಗ ಬಳಗವನ್ನು ಸೃಷ್ಟಿಸಿಕೊಂಡಿದ್ದಾರೆ.

ಹೊಸ ತಲಮಾರಿಗೆ ದೂರದರ್ಶನ, ಚಲನಚಿತ್ರ, ಅಂತರ್ಜಾಲ ಹೀಗೆ ಹಲವು ಮನೋರಂಜನಾತ್ಮ ಮಾಧ್ಯಮಗಳಿವೆ. ಹೊಸ ಕವಿಗಳ ಕವನಗಳನ್ನು ಹಲವು ಪತ್ರಿಕೆಗಳು ಸಹೃದಯದಿಂದ ಪ್ರಕಟಿಸುತ್ತಿವೆ. ಕವಿತೆಗಳನ್ನು ಓದಿ ಹೊಸ ಕವಿಗಳನ್ನು ಗುರ್ತಿಸಿ ಮೆಚ್ಚಿಕೊಳ್ಳುವ ವಲಯ ಬಹಳ ಹಿಂದೆಯೇ ಕಳೆದು ಹೋಗಿದೆ.

ಮೊದಲಿಗೆ, ನಾವು so called ಕವಿಗಳೂ ಸರಳರಾಗಬೇಕಿದೆ. ನಮ್ಮ ಬರವಣಿಗೆ ಕಬ್ಬಿಣದಂತಿರದೆ ಸರಳವಾಗಿ, ಹೇಳಬೇಕಾದ್ದನ್ನು ನಮ್ಮದೇ ಸ್ವಂತಿಕೆಯಲ್ಲಿ ಹೇಳುವಂತಿರಬೇಕು. ಓದಿದೊಡನೆ ತಟ್ಟನೆ ಕವಿತೆ ರುಚಿಸುವಂತಿರಬೇಕು. ಏಕೆಂದರೆ ಭಾರತೀಯ ಭಾಷೆಗಳಲ್ಲೆಲ್ಲ ಸುಲಲಿತ, ಸುಶ್ರಾವ್ಯ, ಶ್ರೀಮಂತ ಮತ್ತು ಸುಲಭ ಭಾಷೆ ಕನ್ನಡ. ಎಂಥಹ ಅನ್ಯ ಭಾಷೀಯರೂ ಕನ್ನಡವನ್ನು ಅಲ್ಪ ಸಮಯದಲ್ಲೇ ಕಲೆತು ಮಾತನಾಡುವಷ್ಟು ಕನ್ನಡ ಸರಳ. ಅಂತೆಯೇ ಕನ್ನಡದಷ್ಟು ಪದ ಸ್ವೀಕರಣ ಎಲ್ಲೂ ಸಾಧ್ಯವಿಲ್ಲ. ಹೊಸ ತಲಮಾರಿನ ಕವಿಗಳೂ, ಸಾಹಿತಿಗಳು ಮತ್ತು ಸೃಜನಶೀಲ ಬರಹಗಾರರು ಇಂದಿನ ನೆಲಗಟ್ಟಿಗೆ ಅನುಗುಣವಾಗಿ ದಿನನಿತ್ಯ ಉತ್ಪತ್ತಿಯಾಗುತ್ತಿರುವ ಅನ್ಯ ಭಾಷೀಯ ಪದಗಳಿಗೆ ಹೊಸ ಪರ್ಯಾಯ ಸರಳ ಕನ್ನಡ ಪದ ಹುಡುಕ ಬೇಕು.

ನನ್ನ ಕವನಗಳನ್ನು ತಮ್ಮ “ಹಾಯ್ ಬೆಂಗಳೂರ್” ವಾರಪತ್ರಿಕೆಯಲ್ಲಿ ಪ್ರಕಟಿಸಿದ ಗುರುಗಳಾದ ಶ್ರೀ. ರವಿ ಬೆಳಗೆರೆ ಯವರಿಗೆ ನನ್ನ ನಮನಗಳು.

ಹೆಚ್ಚೂ ಕಮ್ಮಿ ನಾನು ಕವನ ಗೀಚುವುದನ್ನೇ ಮರೆತಿದ್ದ ದಿನಗಳನ್ನು ನನ್ನಲ್ಲಿ ಮತ್ತೆ ಕವನ ಬರೆಯುವ ಉತ್ಸಾಹ ತುಂಬಿದ, ತಾವೂ ಸ್ವತಃ ಕವಿಯೂ ಆದ ಶ್ರೀ. ಸತ್ಯ ಬೋಧ ಜೋಷಿಯರಿಗೂ ನನ್ನ ನಮನಗಳು.

ನಿಮ್ಮ ಅಭಿಪ್ರಾಯಗಳೇ ನನಗೆ ಸ್ಪೂರ್ತಿಯಾಗಲಿ.

– ಬದರಿನಾಥ ಪಲವಳ್ಳಿ

cameraman@rediffmail.com

ನನ್ನ ಇತರ ಬ್ಲಾಗುಗಳು:

http://www.badari-poems.blogspot.com

http://www.badari-notes.blogspot.com

Advertisements
  1. ಹೊಸ ಕವಿಗಳಿಗೂ ಉತ್ತಮ ಈ ತಾಣ…..

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: